




There's Nothing There! | ಅಲ್ಲಿ ಏನೂ ಇಲ್ಲ!
- Follow us on social media.
- Visit our website.
- Email us at nature.classrooms@gmail.com
ಬರೆದವರು - ರೋಶನಿ ರವಿ, ಜೇನ್ ಸಾಹಿ, ಕಾರುಣ್ಯ ಭಾಸ್ಕರ್
ಚಿತ್ರ ಹಾಗೂ ವಿನ್ಯಾಸ - ಕಾರುಣ್ಯ ಭಾಸ್ಕರ್
ಬೆಂಬಲ - ಬೆಂಗಳೂರು ಸಷ್ಟೈನೆಬಿಲಿಟಿ ಫೋರಮ್
ಸಹಯೋಗ - ದ ಫಿಗ್ ಟ್ರೀ ಲರ್ನಿಂಗ್ ಸೆಂಟರ್
ಭಾಷೆಗಳು - ದ್ವಿಭಾಷಿ (ಇಂಗ್ಲಿಷ್ ಹಾಗೂ ಕನ್ನಡ)
ಅನುವಾದ - ಅನು ಮೋತಿ, ಮಾಧ್ಯಮ ಅನೇಕ ಪ್ರೈ. ಲಿ.
ಅದ್ಭುತ ಚಿತ್ರಗಳೊಂದಿಗೆ ತುಂಬಿದ ಈ ದ್ವಿಭಾಷಿ ಪುಸ್ತಕವನ್ನು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ತರಬನಹಳ್ಳಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪುಟ್ಟ ಮಕ್ಕಳಿಂದ ಸ್ಫೂರ್ತಿಗೊಂಡು ಮಾಡಲಾಗಿದೆ. ತಮ್ಮ ಶಾಲೆ ಹಾಗೂ ಸುತ್ತಲಿನ ಪರಿಸರದ ಬಗ್ಗೆ ಆ ಮಕ್ಕಳ ಕುತೂಹಲ ಹಾಗೂ ಆಸಕ್ತಿ ಈ ಪುಸ್ತಕವನ್ನು ಬರೆಯಲು ನಮಗೆ ಸಹಾಯ ಮಾಡಿದೆ.
'ಅಲ್ಲಿ ಏನೂ ಇಲ್ಲ' ಎಂಬ ಈ ಪುಸ್ತಕ, ದ ಫಿಗ್ ಟ್ರೀ ಲರ್ನಿಂಗ್ ಸೆಂಟರ್ ಜೊತೆಗೆ ಆರಂಭಿಸಿದ ಎರಡು ವರ್ಷದ ಅವಧಿಯ 'ಸುತ್ತ ಮುತ್ತ' ಎನ್ನುವ ಯೋಜನೆಯ ಪ್ರತಿಫಲವಾಗಿದೆ. ಇದಕ್ಕೆ ಬೆಂಬಲ ನೀಡಿದವರು ಬೆಂಗಳೂರು ಸಷ್ಟೈನೆಬಿಲಿಟಿ ಫೋರಮ್. ನೇಚರ್ ಕ್ಲಾಸ್ರೂಮ್ಸ್ ತಂಡ ಹಾಗೂ ದ ಫಿಗ್ ಟ್ರೀ ಲರ್ನಿಂಗ್ ಸೆಂಟರ್ ಅಲ್ಲಿನ ನಿಷ್ಠೆಯುಳ್ಳ ಶಿಕ್ಷಣ ತಜ್ಞೆಯರು (ಜೇನ್, ಸರೋಜಿನಿ, ಹಾಗೂ ಗೌಸಿಯಾ) ಅವರು ತರಬನಹಳ್ಳಿ ಹಾಗೂ ಸಿಲ್ವೇಪುರ ಶಾಲೆಯ ಮಕ್ಕಳೊಂದಿಗೆ ಹಂಚಿಕೊಂಡ ಅನುಭವ ಹಾಗೂ ನೆನಪುಗಳಿಂದ ಕಥೆ ಹಾಗೂ ಪರಿಕಲ್ಪನೆಯನ್ನು ಮೂಡಿಸಿದರೆ, ಅದಕ್ಕೆ ಚಿತ್ರ ಹಾಗೂ ವಿನ್ಯಾಸವನ್ನು ಸೇರಿಸಿ, ಈ ಸುಂದರ ಪುಸ್ತಕವನ್ನು ಹೊರ ತರಲು ಸಹಾಯ ಮಾಡಿದ್ದು ಕಾರುಣ್ಯ ಭಾಸ್ಕರ್.
ನಾವು ಕೆಲಸ ಮಾಡುತ್ತಿರುವ ಶಾಲೆಗಳಿಗೆ ತಕ್ಕಂತೆ ಈ ಪುಸ್ತಕಕ್ಕೆ ಸಂಬಂಧಿಸುವ ಚಟುವಟಿಕೆಗಳನ್ನು ಕೂಡ ನಾವು ಹೊರ ತರುವ ಕಾರ್ಯದಲ್ಲಿ ನಿರತರಾಗಿದ್ದೇವೆ. ಅಷ್ಟೇ ಅಲ್ಲ, ನಮ್ಮ ಉದ್ದೇಶ ಇದನ್ನು ಶಿಕ್ಷಕ/ಕಿಯರು ತಮ್ಮ ತರಗತಿಯಲ್ಲಿ ಹಾಗೂ ಶಾಲೆಯ ಆವರಣದಲ್ಲಿ ಬಳಸಲಿ ಎಂದು. ನಮ್ಮ ವೆಬ್ಸೈಟ್ ಅನ್ನು ಪರಿಶೀಲಿಸಿ, ಜೊತೆಗೆ ಈ ಪುಸ್ತಕದಿಂದ ನಿಮಗೆ ಯಾವುದೇ ಚಟುವಟಿಕೆಗಳು ಹೊಳೆದಲ್ಲಿ ಅದನ್ನು ನಮ್ಮ ಜೊತೆ ಹಂಚಿಕೊಳ್ಳಬೇಕು ಎಂದು ಆಶಿಸಿದಲ್ಲಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ.
ಇದರಿಂದ ಬರುವ ಎಲ್ಲಾ ತರಹದ ಆದಾಯವನ್ನು ನಮ್ಮ ಸಹಯೋಜಕರಾದ ದ ಫಿಗ್ ಟ್ರೀ ಲರ್ನಿಂಗ್ ಸೆಂಟರ್ ಅವರಿಗೆ ನೀಡಲಾಗುವುದು.
- ನಮ್ಮನ್ನು ಸಾಮಾಜಿಕ ಜಾಲತಾಣದಲ್ಲಿ ಸಂಪರ್ಕಿಸಲು
- ನಮ್ಮ ವೆಬ್ಸೈಟ್ ಭೇಟಿ ಮಾಡಲು
- ಇಮೇಲ್ nature.classrooms@gmail.com